ವಿದ್ಯುತ್ ಕಾಯ್ದೆ ವಿರುದ್ಧ ಪ್ರತಿಭಟನೆ

ಕೂಡ್ಲಿಗಿ, ಅ.5 – ಕೇಂದ್ರ ಸರ್ಕಾರ ಜಾರಿಗೆ ತರಲಿರುವ ವಿದ್ಯುತ್ ಕಾಯ್ದೆ  ವಿರೋಧಿಸಿ ಕೂಡ್ಲಿಗಿ ಉಪವಿಭಾಗದ ಜೆಸ್ಕಾಂ ಸಿಬ್ಬಂದಿಗಳು  ಕೂಡ್ಲಿಗಿ ಕಚೇರಿಯಲ್ಲಿ  ಕಪ್ಪು ಪಟ್ಟಿ ಧರಿಸಿ ಇಂದು ಪ್ರತಿಭಟನೆ ನಡೆಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಜೆಸ್ಕಾಂ ಕೂಡ್ಲಿಗಿ ಉಪವಿಭಾಗದ ಎಇಇ  ರಾಜೇಶ್, ಈ ಕಾಯ್ದೆಯಿಂದ ಇಲಾಖೆ ಖಾಸಗಿ ಕಂಪನಿಯ ಪಾಲಾಗಲಿದ್ದು, ಸುಮಾರು 25ರಿಂದ 30ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಮತ್ತು ಬಡವರಿಗೆ, ರೈತರಿಗೆ ಅನಾನುಕೂಲವಾಗಲಿದೆ ಎಂದರು. 

ವಿದ್ಯುತ್ ಕಾಯ್ದೆ 2020 ಜಾರಿಯಾದಲ್ಲಿ ಎಲ್ಲದಕ್ಕೂ ಮೀಟರ್ ಅಳವಡಿಸಿ ಬಿಲ್ ನೀಡಲಿದೆ. ಬರೀ ನೌಕರರಲ್ಲದೇ ಬಡವರಿಗೆ, ರೈತರಿಗೆ ಈ ಕಾಯ್ದೆಯಿಂದ ಅನಾನುಕೂಲವಾಗಲಿದೆ ಎಂದರು. 

ಈ ಸಂದರ್ಭದಲ್ಲಿ ಎಇಓ ಆಶಾ, ಬಣವಿಕಲ್ಲು ರಸಿನಾ ಬೇಗಂ, ಕೊಟ್ರೇಶ್, ಚಿದಾನಂದ, ಪ್ರಹ್ಲಾದ್, ಸುರೇಶ್, ಕೆಪಿಟಿಸಿಎಲ್ ನೌಕರರ ಸಂಘ ಸೇರಿದಂತೆ ಇತರೆ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!