ರಾಣೇಬೆನ್ನೂರು, ಅ. 3- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಡಾ. ಜಿ.ಜೆ. ಮೆಹೆಂದಳೆ ರಚಿಸಿರುವ ಭಿತ್ತಿ ಚಿತ್ರಗಳನ್ನು ಕುಮಾರಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಉಪ ನಿರೀಕ್ಷಕ ಆರ್.ವೈ. ಅಂಬಿಗೇರ್ ಅನಾವರಣಗೊಳಿಸಿದರು.
ಮೆಹೆಂದಳೆ, ಭಿತ್ತಿ ಚಿತ್ರಗಳ ಮಹತ್ವದ ಬಗ್ಗೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಮಾಸ್ಕ್ ಉಪಯೋಗದ ಕುರಿತು ಮಾತನಾಡಿದರು.
ಹರಿಹರ ಸರ್ವೋದಯ ಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಭಿತ್ತಿ ಚಿತ್ರಗಳನ್ನು ಕುಮಾರಪಟ್ಟಣಂನ ವಾಲ್ಮೀಕಿ ವೃತ್ತ ಹಾಗೂ ಸುತ್ತಮುತ್ತಲಿನ ಸಲೂನ್ ಅಂಗಡಿ, ಹೋಟೆಲ್‌ಗಳು, ಎ.ಟಿ.ಎಂ ಹಾಗೂ ದಿನಸಿ ಅಂಗಡಿಗಳ ಮುಂಭಾಗದಲ್ಲಿ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಬಿ.ಎಂ ಬ್ಯಾಂಕ್ ಮ್ಯಾನೇಜರ್ ರೋಶನ್ ನೇತ್ರಕರ್, ಹೆಡ್ ಕಾನ್‌ಸ್ಟೇಬಲ್ ಬಿ.ಕೆ. ಕಂಬಳಿ, ಬ್ಯಾಂಕ್‌ನ ಶ್ರೀಮತಿ ಸಹನಾ ಹೆಗಡೆ, ವಿಷ್ಣು ಭಾಸುರನ್,ಗೌರವ ಸಿಂಗ್, ಶಿವಪ್ರಸಾದ, ವಿಶ್ವನಾಥ ಪಾಟೀಲ, ಅಣ್ಣಪ್ಪ, ಫಕ್ಕಿರೇಶ ಅವರು ಉಪಸ್ಥಿತರಿದ್ದರು.