ಕೂಡ್ಲಿಗಿ, ಅ. 3 – ಉತ್ತರ ಪ್ರದೇಶದ ಹತ್ರಾಸ್ ಪ್ರದೇಶದಲ್ಲಿ ಯುವತಿಯ ಮೇಲೆ ಅತ್ಯಾಚಾರ ಮಾಡಿ, ಹೀನ ಕೃತ್ಯ ನಡೆಸಿದ ಆರೋಪಿಗಳನ್ನು ಗಲ್ಲಿಗೇರಿಸಿ ಅಥವಾ ಎನ್‌ಕೌಂಟರ್ ಮಾಡಿ ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಅಖಿಲ ಭಾರತ ವಾಲ್ಮೀಕಿ ಮಹಾಸಭಾ, ಜೆಡಿಎಸ್ ಹಾಗೂ ಕಾಂಗ್ರೆಸ್ ಎಸ್.ಟಿ. ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎನ್.ಟಿ. ಬೊಮ್ಮಣ್ಣ ಮಾತನಾಡಿ, ಯುವತಿ ಮೇಲಿನ ಅತ್ಯಾಚಾರವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು. ವಾಲ್ಮೀಕಿ ಮಹಾಸಭಾ ರಾಜ್ಯ ಸಂಘಟನ ಕಾರ್ಯದರ್ಶಿ ಜಿಂಕಲ್ ನಾಗಮಣಿ ಮಾತನಾಡಿದರು.
ತಾಲ್ಲೂಕು ಅಧ್ಯಕ್ಷ ಎಸ್. ಸುರೇಶ, ಜಿಲ್ಲಾ ಕಾಂಗ್ರೆಸ್ ಪ.ಪಂಗಡದ ಅಧ್ಯಕ್ಷ ಕಾವಲಿ ಶಿವಪ್ಪ. ಕೆಪಿಸಿಸಿ ಮಾಜಿ ಕಾಯ೯ದಶಿ೯ ಉಮೇಶಣ್ಣ. ಯುವ ಮುಖಂಡ ರಾಜುಲು ಮಂಜುನಾಥ. ವಾಲ್ಮೀಕಿ ಸಮಾಜದ ಮುಖಂಡರಾದ ಸಣ್ಣ ಕೊತ್ಲಪ್ಪ, ಮಂಜುನಾಥ ಮಯೂರ, ರಾಘವೇಂದ್ರ ಗುರಿಕಾರ, ಬಾಣದ ಶಿವಶಂಕರ, ಗುಜ್ಜಲ ಗಣೇಶ, ಅಂಬಲಿ ನಾಗಣ್ಣ. ಮೂರ್ತಿ, ಸೂರ್ಯಪ್ರಕಾಶ್, ಸತೀಶ್, ರಾಘವೇಂದ್ರ, ಸುದರ್ಶನ, ಎಸ್. ವೆಂಕಟೇಶ್, ಪ.ಪಂ. ಸದಸ್ಯರಾದ ಶುಕೂರು, ಚಂದ್ರ, ಈಶಣ್ಣ, ಸಿರಿಬಿ ಮಂಜುನಾಥ. ದುರುಗೇಶ, ಗುಪ್ಪಾಲ ಕಾರಪ್ಪ, ಗುಪ್ಪಾಲ ಸಿದ್ದೇಶ. ಕೊಮಾರಿ, ಬೆಟ್ಟ ರಮೇಶ್, ಸಾಲುಮನಿ ರಾಘವೇಂದ್ರ, ದುರುಗೇಶ್, ನಾಗಣ್ಣ, ವೆಂಕಣ್ಣ, ನಲಮತ್ತಿ ದುರುಗೇಶ್, ಮಲ್ಲಾಪುರ ರಾಘಣ್ಣ ಮತ್ತಿತರರು ಭಾಗವಹಿಸಿದ್ದರು.