ಮಲೇಬೆನ್ನೂರು, ಅ.2- ಪಟ್ಟಣದಲ್ಲಿ ಕಳೆದ 3 ದಿನಗಳಿಂದ ಮಾಸ್ಕ್ ಧರಿಸದ ವಾಹನಗಳ ಸವಾರರಿಗೆ ಪುರಸಭೆಯಿಂದ ಸುಮಾರು 14 ಸಾವಿರ ರೂ. ದಂಡ ಹಾಕಲಾಗಿದೆ. ಗುರುವಾರ ಸಂತೆ ಮಾರುಕಟ್ಟೆಯಲ್ಲಿ ಮಾಸ್ಕ್ ಹಾಕದೇ ಸಂತೆಗೆ ಬಂದಿದ್ದ ಜನರಿಗೂ ದಂಡ ಹಾಕಿ, ಮಾಸ್ಕ್ ಬಗ್ಗೆ ಅರಿವು ಮೂಡಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಪರಿಸರ ಇಂಜಿನಿಯರ್ ಉಮೇಶ್, ಆರೋಗ್ಯಾಧಿಕಾರಿ ಗುರುಪ್ರಸಾದ್, ನವೀನ್, ಗಣೇಶ್, ಪ್ರಭು ಹಾಗೂ ಪುರಸಭೆ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
March 12, 2025