ಕೂಡ್ಲಿಗಿ : ಆರೋಪಿಗಳಿಗೆ ಗಲ್ಲಿಗೇರಿಸಲು ಒತ್ತಾಯ

ಕೂಡ್ಲಿಗಿ, ಅ. 1- ಇಲ್ಲಿನ ಅಖಿಲ ಭಾರತ ಯುವಜನ ಫೆಡರೇಶನ್ ನಗರ ಘಟಕ, ಕೂಡ್ಲಿಗಿ ಕಟ್ಟಡ ಕಾರ್ಮಿಕರ ಸಂಘ, ಎಐಟಿಯುಸಿ, ಕೂಡ್ಲಿಗಿ ಭಾರತೀಯ ಮಹಿಳಾ ಒಕ್ಕೂಟ, ತಾಲ್ಲೂಕು ಸಮಿತಿ ವತಿಯಿಂದ ಉತ್ತರಪ್ರದೇಶ ರಾಜ್ಯದ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಿರುವುದು ಈ ದೇಶದ ಮಹಿಳೆಯರಿಗೆ ಮಾಡುವಂತಹ ಶೋಷಣೆ ಮತ್ತು ಕ್ರೂರ ಕೃತ್ಯ ಎಸಗಿದ ಆರೋಪಿಗಳನ್ನು ಕೂಡಲೇ ಗಲ್ಲಿಗೇರಿಸಬೇಕು ಎಂದು ತಹಶೀಲ್ದಾರ್ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲ್ಲೂಕು ಸಂಚಾಲಕ ಕಮ್ಯುನಿಸ್ಟ್ ವೀರಣ್ಣ ಹಾಗೂ ಸಂಘಟನೆಯ ಪದಾಧಿಕಾರಿಗಳು, ಮಹಿಳೆಯರು, ಯುವಕರು ಭಾಗವಹಿಸಿದ್ದರು.

error: Content is protected !!