ದಾವಣಗೆರೆ, ಅ.1- ತಾಲ್ಲೂಕಿನ ಮಲ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಪೌಷ್ಟಿಕ ತೋಟ ಮಂಜೂರಾಗಿದ್ದು, ಇಂದು ದಾವಣಗೆರೆ ಉತ್ತರ ವಲಯದ ಕ್ಷೇತ್ರದ ಶಿಕ್ಷಣಾಧಿಕಾರಿ ಜಿ. ಕೊಟ್ರೇಶ್ ಸಸಿಗಳನ್ನು ನೆಟ್ಟು ನೀರುಣಿಸುವ ಮುಖೇನ ಚಾಲನೆಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಂ. ಸಿದ್ದೇಶ್, ಆಲೂರು ಗ್ರಾಮ ಪಂಚಾಯಿತಿ ಪಿಡಿಓ ನಿಂಗಪ್ಪ, ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಎಂ.ಆರ್. ಸುರೇಂದ್ರ, ಪತ್ರಕರ್ತ ಎ.ಸಿ. ನಾಗರಾಜ, ಶಾಲೆಯ ಮುಖ್ಯೋಪಾಧ್ಯಾಯ ಪ್ರಕಾಶ್ ಮಡಿವಾಳ, ಸಹ ಶಿಕ್ಷಕ ಚಂದ್ರನಾಯ್ಕ, ಈಶ್ವರಪ್ಪ, ವಿಜಯಲಕ್ಷ್ಮಿ, ಪುಷ್ಪಾಂಜಲಿ, ಗ್ರಾಮದ ಮುಖಂಡರಾದ ಪೂಜಾರಿ ಮಂಜಪ್ಪ, ಸೂಲದಹಳ್ಳಿ ಮಹೇಶ್, ಲಿಂಗರಾಜ, ಡಿ. ಹನುಮಂತಪ್ಪ, ಮಹೇಶ್, ನೀರ್ಗಂಟಿ ಹನುಮಂತಪ್ಪ ಸೇರಿದಂತೆ ಇತರರು ಇದ್ದರು.