ದಾವಣಗೆರೆ,ಅ.1- ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ ಎಂದು ಬಂದ ದೂರಿನ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆರೋಗ್ಯ ಸಾಯಿ ಸಮಿತಿಯ ಛೇರ್ಮನ್ ಜಯಮ್ಮ ಗೋಪಿನಾಯಕ್ ಅವರು ವಿದ್ಯಾನಗರದ ಬೇಕರಿಯೊಂದಕ್ಕೆ ಇಂದು ಸಂಜೆ ಭೇಟಿ ನೀಡಿ ಪರಿಶೀಲಿಸಿ, ಎಚ್ಚರಿಕೆ ನೀಡಿದರು. ಪಾಲಿಕೆ ಸದಸ್ಯ ಕೆ. ಎ. ವೀರೇಶ್, ಪಾಲಿಕೆ ಆರೋಗ್ಯ ವಿಭಾಗದ ನಿರೀಕ್ಷಕರುಗ ಳಾದ ಶಶಿಧರ್, ಗಿರೀಶ್ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
January 11, 2025