ಹರಿಹರ, ಅ. 1- ನಗರದ ಸಾಹಿತ್ಯ ಸಂಗಮ ಮತ್ತು ಚಿಂತನ ಪ್ರತಿಷ್ಠಾನದಿಂದ ಚಿಂತನ ಪ್ರತಿಷ್ಠಾನದ ಕಚೇರಿಯಲ್ಲಿ ಗಾಯಕ, ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ನುಡಿ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ.ಕೊಟ್ರೇಶಪ್ಪ ಮಾತನಾಡಿ, ಎಸ್.ಪಿ.ಬಿ.ಅವರ ಅಕಾಲಿಕ ನಿಧನ ಸಂಗೀತ ಲೋಕಕ್ಕೆ ನಷ್ಟ ಉಂಟುಮಾಡಿದೆ. ನಾಡಿನಲ್ಲಿ ಅವರ ಹಾಡುಗಳನ್ನು ಕೇಳದವರೇ ಇಲ್ಲ. ಸಂಗೀತ ಲೋಕದಲ್ಲಿ ದಾಖಲೆ ಬರೆದು ಅಮರರಾಗಿ ದ್ದಾರೆಂದರು. ಚಿಂತನ ಪ್ರತಿಷ್ಠಾ ನದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್ ಮಾತನಾಡಿ, ಎಸ್.ಪಿ.ಬಿ. ಅವರ ಸಂಗೀತಕ್ಕೆ ಎಲ್ಲಾ ಧರ್ಮದ ಜನ ಮಾರುಹೋಗಿದ್ದರು ಎಂದರು. ಜಿ.ಟಿ.ತಿಪ್ಪಣ್ಣ ರಾಜು ಮಾತನಾಡಿ, ಎಸ್.ಪಿ.ಬಿ. ಅವರಲ್ಲಿ ಅಪಾರವಾದ ಕಂಠ ಸಿರಿಯಿತ್ತು ಎಂದು ಹೇಳಿದರು.
ಬಿ.ಬಿ.ರೇವಣನಾಯ್ಕ, ಶಿಕ್ಷಕ ರಿಯಾಜ್ ಅಹಮದ್, ಡಿ.ಫ್ರಾನ್ಸಿಸ್, ನಾಗರತ್ನಮ್ಮ ಮತ್ತಿತರರು ಮಾತನಾಡಿದರು. ವಿ.ಬಿ.ಕೊಟ್ರೇಶ್ ಸ್ವಾಗತಿಸಿದರು.