ದಾವಣಗೆರೆ, ಜೂ.27- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಆತ್ಮ ನಿರ್ಭರ್ ಭಾರತ್ ಅಭಿಯಾನವನ್ನು ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ನಿನ್ನೆ ಸಂಜೆ ನಡೆಸಲಾಯಿತು.
ಚೀನಾ ವಸ್ತುಗಳನ್ನು ಬಹಿಷ್ಕರಿಸಿ, ದೇಶಿ ವಸ್ತುಗಳನ್ನು ಬಳಸಿ ಎನ್ನುವ ಈ ಅಭಿಯಾನದಲ್ಲಿ ನಡೆ ಮುಂದೆ ನಡೆ ಮುಂದೆ ನಡೆ ಮುಂದೆ ದೇಶಿ ವಸ್ತುಗಳನ್ನು ಬಳಸುತ್ತಾ ಸಾಗೋಣ ಮುಂದೆ ಈ ರೀತಿಯಾಗಿ ಪೋಸ್ಟರ್ ಬರಹಗಳ ಮೂಲಕ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ಕಾರ್ಯಕರ್ತರು ನಾಗರಿಕರಲ್ಲಿ ಮನವಿ ಮಾಡಿದರು.
ಜಪಾನ್ ಮತ್ತು ಭಾರತದ ಜನರ ದೇಶ ಪ್ರೇಮದ ಬಗ್ಗೆ ಮತ್ತು ಇದರಿಂದ ದೇಶದ ಎಕಾನಮಿ ಮೇಲೆ ಯಾವ ಪರಿಣಾಮ ಬೀರುತ್ತದೆ. ಅದಕ್ಕಾಗಿ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸಿ ಎಂದು ನಾಗರಿಕರಿಗೆ ಒಂದು ನೈಜ್ಯ ಉದಾಹರಣೆಯ ಮೂಲಕ ನಗರಾಧ್ಯಕ್ಷ ಪವನ್ ರೇವಣಕರ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶರತ್, ನಗರ ಕಾರ್ಯದರ್ಶಿ ಇಟಗಿ ಆಕಾಶ್, ಅರುಣ್, ಪೃಥ್ವಿ, ಸುಮನ್, ವಿಜಯ್ ಸೇರಿದಂತೆ ಇತರರು ಇದ್ದರು.