ಮಲೇಬೆನ್ನೂರು, ಅ. 1- ಜಿಗಳಿ ಗ್ರಾಮ ಪಂಚಾಯ್ತಿ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಗ್ರಾಮ ಸಭೆಯನ್ನು ಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೇಖಾ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಹಿಳೆಯರ ಹಕ್ಕುಗಳು ಹಾಗೂ ಸಬಲೀಕರಣ, ಮಹಿಳೆಯರ ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ. ಆಡಳಿತಾಧಿಕಾರಿ ಕೆ. ಗಂಗಾಧರಪ್ಪ ಮಾತನಾಡಿ, ಗ್ರಾ.ಪಂ. ಮೂಲಕ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕೆಂದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಕೆ. ಮಹೇಶ್ವರಪ್ಪ, ಎಂ.ವಿ. ನಾಗರಾಜ್, ಕೆ.ಎಂ. ರಾಮಪ್ಪ, ಜಿ. ಬೇವಿನಹಳ್ಳಿಯ ರಾಜಪ್ಪ, ತಾ.ಪಂ. ಕಛೇರಿಯ ಸಹಾಯಕ ವೈದ್ಯಾಧಿಕಾರಿ ಲಿಂಗರಾಜ್, ಇಂಜಿನಿಯರ್ ಹನುಮಂತಪ್ಪ, ಮಕ್ಕಳ ಸಹಾಯವಾಣಿ ಅಧ್ಯಕ್ಷ ರಾಮಾನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಲಕ್ಷ್ಮೀ, ಮಕ್ಕಳ ಸಹಾಯವಾಣಿ ಸಂಯೋಜಕ ಕೊಟ್ರೇಶ್, ಪಿಡಿಓ ದಾಸರ ರವಿ, ಬಿ. ದಾನಪ್ಪ, ಬಿ. ಮೌನೇಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಜಮಾಬಂದಿ : 2019-20ನೇ ಸಾಲಿನ 14ನೇ ಹಣಕಾಸು ಯೋಜನೆ, ಕಂದಾಯ ವಸೂಲಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ವಿವಿಧ ಯೋಜನೆಗಳ ಜಮಾಬಂದಿಯನ್ನು ಗ್ರಾ.ಪಂ. ಆಡಳಿತಾಧಿಕಾರಿ ಕೆ. ಗಂಗಾಧರಪ್ಪ ಅವರ ಅಧ್ಯಕ್ಷತೆಯಲ್ಲಿ ಇದೇ ದಿನ ನಡೆಸಲಾಯಿತು.