ಕ್ಷೌರಿಕರು ಪರಿಹಾರ ಧನ ಪಡೆಯಲು ನಿಬಂಧನೆ ಸಡಿಲಿಕೆಗೆ ಮನವಿ

ದಾವಣಗೆರೆ, ಜೂ.24- ಕೋವಿಡ್-19 ಮಹಾಮಾರಿಯಿಂದ ಸಂಕಷ್ಟಕ್ಕೆ ಒಳಗಾದ ಕ್ಷೌರಿಕರಿಗೆ ಸರ್ಕಾರದ 5,000 ರೂ. ಪರಿಹಾರ ಪಡೆಯಲು ನೀತಿ, ನಿಬಂಧನೆಗಳಲ್ಲಿ ಪರವಾನಿಗಿ ಕಡ್ಡಾಯ ಮಾಡಿರುವುದನ್ನು ರದ್ದುಗೊಳಿಸಿ, ಇತರೆ ನಿಯಮಗಳನ್ನು ಸಡಿಲಿಸಿ, ಸರಳೀಕರಿಸುವಂತೆ ಒತ್ತಾಯಿಸಿ ಸವಿತಾ ಸಮಾಜ ಸಂಘ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.

ಸವಿತಾ ಸಮಾಜದಲ್ಲಿ ಬಹುತೇಕರು ಕ್ಷೌರಿಕ ವೃತ್ತಿಯನ್ನೇ ಅವಲಂ ಬಿಸಿದ್ದಾರೆ. ಶೇ. 95 ರಷ್ಟು ಕ್ಷೌರಿಕರಲ್ಲಿ ಪರವಾನಗಿ ಇರುವುದಿಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮಾಜ ಹಿಂದುಳಿದಿದೆ. ಹೀಗಿರು ವಾಗ ಪರವಾನಿಗಿ ಕಡ್ಡಾಯ ಹೇರುವುದು ಸರಿಯಲ್ಲ. ಮರುಪರಿಶೀಲಿಸಿ ಪರವಾನಗಿ ಕಡ್ಡಾಯ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಪರಿಹಾರಕ್ಕೆ ಅರ್ಜಿ ದಿನಾಂಕ ಮುಂದೂಡುವಂತೆ ಮನವಿ ಮಾಡಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಎನ್‌. ರಂಗಸ್ವಾಮಿ, ಕಾರ್ಯದರ್ಶಿ ಜಿ.ಎಸ್. ಪರಶುರಾಮಪ್ಪ, ಖಜಾಂಚಿ ಆರ್. ಕರಿಬಸಪ್ಪ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

error: Content is protected !!