ದಾವಣಗೆರೆ, ಜೂ. 23 – ರಾಜ್ಯ ಸರ್ಕಾರದ ಸೂಚನೆಯಂತೆ ಪಾಲಿಕೆಯ ಪೌರ ಕಾರ್ಮಿಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಗರ ಪಾಲಿಕೆಯ ಆವರಣದಲ್ಲಿ ಮಂಗಳವಾರದಂದು 214 ಪೌರ ಕಾರ್ಮಿಕರ ಗಂಟಲು ದ್ರವದ ಮಾದರಿಯನ್ನು ಪಡೆಯಲಾಗಿದೆ. ಪಾಲಿಕೆಯಲ್ಲಿ ಒಟ್ಟು 518 ಪೌರ ಕಾರ್ಮಿಕರಿದ್ದು,ಅವರೆಲ್ಲರ ಗಂಟಲು ದ್ರವದ ಮಾದರಿಯನ್ನು ಇನ್ನೆರಡು ದಿನಗಳಲ್ಲಿ ಪಡೆಯಲಾಗುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜೊತೆಗೂಡಿ ಮಹಾನಗರ ಪಾಲಿಕೆ ಈ ಕ್ರಮ ತೆಗೆದುಕೊಳ್ಳುತ್ತಿದೆ. ಚಿಗಟೇರಿ ಆಸ್ಪತ್ರೆಯ ತಂಡ ಗಂಟಲು ದ್ರವ ಪಡೆಯುವ ಕಾರ್ಯದಲ್ಲಿ ಭಾಗಿಯಾಗಿತ್ತು.
January 23, 2025