ದಾವಣಗೆರೆ, ಜೂ.21- ನಗರದ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳು, ಪೋಷಕರು, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು, ಶಿಕ್ಷಕೇತರ ವರ್ಗದವರು, ಆಡಳಿತ ಮಂಡಳಿಯವರಿಗಾಗಿ ವಿಶ್ವ ಯೋಗ ದಿನದ ಅಂಗವಾಗಿ `ಯೋಗೋಪನ್ಯಾಸ’ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ಇಂದು ನಡೆಸಲಾಯಿತು.
ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆ ದೈಹಿಕ ಶಿಕ್ಷಕ ಕೆ.ಹಾಲಪ್ಪ ಯೋಗೋಪನ್ಯಾಸ ನೀಡಿದರು. ತಾಂತ್ರಿಕ ನಿರ್ವಹಣೆ ಶಿಕ್ಷಕ ಲಿಂಗರಾಜ್ ವಿ. ಗಾಜಿ, ಶಿಕ್ಷಕ ಕೆ.ಪಿ. ರುದ್ರೇಶ ಮೂರ್ತಿ ಸ್ವಾಗತಿಸಿದರು.