ಹರಪನಹಳ್ಳಿ, ಜೂ. 19- ಕೋವಿಡ್-19 ಭೀತಿಯಲ್ಲೂ ತಾಲ್ಲೂಕಿನ ಉಚ್ಚಂಗಿದುರ್ಗದ ಐತಿಹಾಸಿಕ ಉಚ್ಚಂಗೆಮ್ಮ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಭಕ್ತರು 15,43,333 ರೂ. ಹಾಗೂ ದಾಸೋಹಕ್ಕಾಗಿ ಮೀಸಲಿಟ್ಟ ಕಾಣಿಕೆ ಹುಂಡಿಯಲ್ಲಿ 1,67,017 ರೂ.ಗಳು ಸಂಗ್ರಹವಾಗಿವೆ ಎಂದು ಉಪತಹಶೀಲ್ದಾರ್ ಫಾತಿಮಾ ತಿಳಿಸಿದ್ದಾರೆ.
ಕಳೆದ ಜನವರಿ 20ರಂದು ಹುಂಡಿಯನ್ನು ತೆರೆಯಲಾಗಿತ್ತು. ಸಂಗ್ರಹ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮವಾಸ್ಯೆಗೆ ದಾಸೋಹ ಜರುಗುತ್ತಿತ್ತು. ಈಗ ಸರ್ಕಾರದ ನಿರ್ದೇಶನದಂತೆ ಕೊರೊನಾ ಕಾರಣ ದಾಸೋಹ ಸ್ಥಗಿತಗೊಳಿಸಲಾಗಿದೆ.
ಮುಜರಾಯಿ ಇಲಾಖೆಯ ಶಾಂತಮ್ಮ, ರಮೇಶ್, ಗ್ರಾಮ ಲೆಕ್ಕಾಧಿಕಾರಿ ಶ್ರೀಕಾಂತ, ಮಂಜುನಾಥ ಮತ್ತಿತರರು ಹಾಜರಿದ್ದರು.