ಹರಪನಹಳ್ಳಿ, ಜೂ. 19- ತಾಲ್ಲೂಕು ಬಿಜೆಪಿ ಮಂಡಲದಿಂದ ಕೋವಿಡ್ -19 ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡಲು ಮತ್ತು ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಮಾಸ್ಕ್ ದಿನಾಚರಣೆ ಆಚರಿಸಲಾಯಿತು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ, ಉಪಾಧ್ಯಕ್ಷರಾದ ನಿಟ್ಟೂರು ಸಣ್ಣಹಾಲಪ್ಪ, ಬಿಜೆಪಿ ಎಸ್ಟಿ ಘಟಕದ ತಾಲ್ಲೂಕು ಅಧ್ಯಕ್ಷ ಆರ್. ಲೋಕೇಶ್, ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ತಿಮ್ಮಣ್ಣ, ಮುಖಂಡರಾದ ಶಿವಾನಂದ, ರಾಜಪ್ಪ, ಕೃಷ್ಣ, ಸಂತೋಷ, ಕೊಟ್ರೇಶ, ವೀರಭದ್ರಪ್ಪ ಹಲವಾಗಲು, ಕೆಂಗಳ್ಳಿ ಪ್ರಕಾಶ, ರಾಜಪ್ಪ, ಆನಂದರಾವ್ ಮತ್ತಿತರರು ಭಾಗವಹಿಸಿದ್ದರು.
December 25, 2024