ಉಜ್ಜನಿಪುರ ಸಮೀಪದಲ್ಲಿ ಸಂಸ್ಕೃತಿ ಭವನಕ್ಕೆ ಭೂಮಿ ಪೂಜೆ

ಹೊನ್ನಾಳಿ, ಜೂ.18- ದೇವಾಲಯಗಳು ಭಾರತೀಯ ಸಂಸ್ಕೃತಿಯ ಪ್ರತೀಕಗಳು ಇದ್ದಂತೆ. ಅವುಗಳ ಉತ್ತಮ ರೀತಿ ನಿರ್ವಹಣೆ  ಸಾರ್ವಜನಿಕರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ತಾಲ್ಲೂಕಿನ ಉಜ್ಜನಿಪುರ ಸಮೀಪದ
ಶ್ರೀ ಚೌಡೇಶ್ವರ ದೇವಾಲಯದ ಆವರಣದಲ್ಲಿ ತಾಂಡಾ ಅಭಿವೃದ್ಧಿ ನಿಗಮದ ಸುಮಾರು ಹತ್ತು ಲಕ್ಷ ಅನುದಾನದಲ್ಲಿ ನಿರ್ಮಿಸಲುದ್ದೇಶಿಸಿರುವ ಸಂಸ್ಕೃತಿ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಹೊಟ್ಯಾಪುರ ಹಿರೇಮಠದ  ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇವಸ್ಥಾನ ಮುಂತಾದ ಶ್ರದ್ಧಾ ಕೇಂದ್ರಗಳ ಕಟ್ಟಡ ನಿರ್ಮಿಸುವುದು ಮುಖ್ಯವಲ್ಲ. ಇದರ ಜೊತೆಗೆ ಅವುಗಳ ಪಾವಿತ್ರ್ಯತೆಯನ್ನು ನಿರಂತರ ಕಾಪಾಡಿಕೊಂಡು ಹೋಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಸಿ.ಸುರೇಂದ್ರ ನಾಯ್ಕ, ಮುಖಂಡರಾದ ಉಮೇಶ್ ನಾಯ್ಕ,  ಗಣಪತಿ ನಾಯ್ಕ, ಹೊಟ್ಯಾಪುರ ರವಿ, ಬುಳ್ಳಾಪುರದ ಸುರೇಶ್, ರಾಂಪುರದ ಪರಮೇಶ್ವರಪ್ಪ, ಸದಾಶಿವಪುರದ ಬಸವರಾಜಪ್ಪ ಮತ್ತು ಇತರರು ಇದ್ದರು.

error: Content is protected !!