ದಾವಣಗೆರೆ, ಜೂ.13- ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕತ ಸಾಲುಮರದ ತಿಮ್ಮಕ್ಕ ಅವರು ಮರ ನೆಟ್ಟು ಪೋಷಿಸುವ ಕಾರ್ಯವನ್ನು ನೆನಪಿಸಿಕೊಂಡು, ನಾವು ಜೀವಂತವಾಗಿರಬೇಕು ಎಂದರೆ ಬಂಗಾರ, ಹಣ, ಆಸ್ತಿ ಯಾವುದೂ ಮುಖ್ಯವಲ್ಲ. ಪ್ರಕೃತಿ ಬೇಕು ಎಂದು ಶಿಕ್ಷಣ ತಜ್ಞ ಕೆ. ಇಮಾಂ ಆಶಯ ವ್ಯಕ್ತಪಡಿಸಿದ್ದಾರೆ.
ಸಸ್ಯಗಳು ನಮಗೆ ಆಮ್ಲಜನಕ ಕೊಡುತ್ತವೆ. ಆದರೆ, ಇಂದಿನ ದಿನಗಳಲ್ಲಿ ನಾವು ಲಕ್ಷಗಟ್ಟಲೇ ಬಳಸುತ್ತಿರುವ ವಾಹನಗಳು ಇಂಗಾಲದ ಡೈ-ಆಕ್ಸೈಡ್‍ನ್ನು ಉತ್ಪಾದಿಸುತ್ತಿವೆ. ಇದರಿಂದ ನಮ್ಮ ನಾಶಕ್ಕೆ ನಾವೇ ಕಾರಣರಾಗುತ್ತಿದ್ದೇವೆ. ಬೇರೆ ಎಲ್ಲಾ ಕಾರ್ಯಕ್ಕಿಂತ ತುಂಬಾ ಮುಖ್ಯ ಕಾರ್ಯವೆಂದರೆ ಗಿಡ ನೆಟ್ಟು ಪೋಷಿಸುವುದಾಗಿದೆ ಎಂದು ಅವರು ಪರಿಸರ ಕಾಳಜಿ ತೋರಿದ್ದಾರೆ.
ವಿದ್ಯಾರ್ಥಿಗಳೆಲ್ಲರೂ ತಮ್ಮ – ತಮ್ಮ ಮನೆಯ ಹತ್ತಿರ ಗಿಡಗಳನ್ನು ಬೆಳೆಸಿ ಎಂದು ಕರೆ ನೀಡಿರುವ ಇಮಾಂ, ನಾವೆಲ್ಲರೂ ಒಂದೊಂದು
ಗಿಡ ನೆಟ್ಟು ಬೆಳೆಸಿದರೆ ಪರಿಸರ ಉಳಿಸಿ ಬೆಳೆಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಮನೆಯ ಹಿತ್ತಲಿನಲ್ಲಿ ಬೆಳೆಸಿರುವ ಕರ್ಣಕಮಲದ ಪುಷ್ಪಗಳನ್ನು ತೋರಿಸಿ ಪರಿಸರ ಜಾಗೃತಿ
ಮೂಡಿಸುವ ಕಾರ್ಯ ಇಮಾಂ ಮಾಡಿದ್ದಾರೆ.