ಹೊನ್ನಾಳಿ, ಜೂ.12- ಪಟ್ಟಣದ ತುಂಗಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಶ್ರೀನಿವಾಸ್, ಉಪಾಧ್ಯಕ್ಷರಾಗಿ ಜಿ.ಯಶೋಧಮ್ಮ ಮಹೇಶ್ವರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸಹಕಾರ ಸಂಘದ ಸಿಡಿಓ ಎಚ್.ಎಸ್ ಸತೀಶ್ ಘೋಷಿಸಿದ್ದಾರೆ.
ತುಂಗಾ ಪತ್ತಿನ ಸಹಕಾರ ಸಂಘದ 2020 ರಿಂದ 2025ರ ಅವಧಿಗೆ ಮಾರ್ಚ್‍ನಲ್ಲಿ ಚುನಾವಣೆ ನಡೆದು, 13 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಚುನಾವಣೆ ಪ್ರಕ್ರಿಯೆಯಲ್ಲಿ ಎಚ್.ಎಸ್. ಬಸವಣ್ಯಪ್ಪ, ಎಂ.ಆರ್.ಶಿವಮೂರ್ತಿ, ಬಿ.ಎಚ್.ಚಂದ್ರಪ್ಪ, ಎನ್.ರಾಜೇಂದ್ರ, ಎಚ್.ಎ.ಅಶೋಕ, ಎಂ.ಇ.ನಾಗರಾಜ್, ಬಿ.ಅಣ್ಣಪ್ಪನಾಯ್ಕ, ಜಿ.ಎಸ್.ಸುರೇಶ್, ಎಂ.ಸಿ.ಬಸವರಾಜಪ್ಪ, ಜಯಮ್ಮ ಬಸವನಗೌಡ, ಕಾರ್ಯದರ್ಶಿ ಕೆ.ವಿರೂಪಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.