ದಾವಣಗೆರೆ, ಜೂ. 12- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸ್ವಚ್ಛತೆ ಕಾಪಾಡಲು ಮತ್ತು ನಾಯಿ-ಹಂದಿಗಳ ಹಾವಳಿಯನ್ನು ನಿಯಂತ್ರಿಸುವಂತೆ ಕರ್ನಾಟಕ ಸೋಷಿಯಲ್ ಸರ್ವೀಸ್ ಸಂಘಟನೆ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದೆ.
ಈ ಭಾಗದಲ್ಲಿ ಸ್ವಚ್ಛತೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಸ್ವಚ್ಛತೆ ಇಲ್ಲದಿದ್ದರೆ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದೆ. ಸಂಗ್ರಹವಾದ ಕಸವನ್ನು ಕೂಡಲೇ ವಿಲೇವಾರಿ ಮಾಡಿ, ನೀರು ನಿಲ್ಲದಂತೆ ನಿಯಂತ್ರಿಸುವುದು ಹಾಗೂ ನಿಂತ ಕೊಳಚೆ ನೀರನ್ನು ಸರಿಪಡಿಸಿ ಸಂಬಂಧಪಟ್ಟ ಔಷಧಿ ಸಿಂಪರಿಸುವಂತೆ ಮನವಿ ನೀಡಿದ್ದಾರೆ.
ನಾಯಿ ಮತ್ತು ಹಂದಿಗಳ ಹಾವಳಿ ಮಿತಿ ಮೀರಿದ್ದು, ಸ್ವಚ್ಛತೆ ಕಾಪಾಡುವುದು ಪಾಲಿಕೆ ಕರ್ತವ್ಯವಾಗಿದೆ ಎಂದು ಸಂಘಟನೆ ಅಧ್ಯಕ್ಷ ಮೊಹ್ಮದ್ ಹಯಾತ್, ಉಪಾಧ್ಯಕ್ಷ ಮೊಹ್ಮದ್ ಯೂನೂಸ್, ಅಲ್‌ಹಾಶ್ಮಿ ಸಂಘಟನೆ, ಕಾರ್ಯದರ್ಶಿ ವಾಸಿಂ ಖಾನ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಅವರಿಗೆ ಮನವಿ ನೀಡಿದ್ದಾರೆ.