ದಾವಣಗೆರೆ, ಜೂ.12- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕೊರೊನಾ ವಾರಿಯರ್‌ನಲ್ಲಿ ಒಬ್ಬರಾದ ಪೊಲೀಸ್ ತಂಡದವರಿಗೆ ಸಸಿ ನೀಡಿ ಕೃತಜ್ಞತೆ ಸಲ್ಲಿಸುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು.
ವಿದ್ಯಾನಗರ, ಕೆಟಿಜೆ ನಗರ, ಗ್ರಾಮಾಂತರ ಮತ್ತು ಬಡಾವಣೆ ಪೊಲೀಸ್ ಠಾಣೆಗಳಿಗೆ ತೆರಳಿ ಆರಕ್ಷಕರಿಗೆ ಮತ್ತು ನಗರದ ವಿವಿಧ ಕಾಲೇಜುಗಳ ಆಡಳಿತ ಮಂಡಳಿಯವರಿಗೆ, ಅಧ್ಯಾಪಕರಿಗೆ ಗಿಡಗಳನ್ನು ನೀಡಿದರು. ನಗರ ಕಾರ್ಯದರ್ಶಿ ಇಟಗಿ ಆಕಾಶ್, ತಿಪ್ಪೇಶ್, ಪೃಥ್ವಿ, ರಾಜು ಇನ್ನಿತರರು ಭಾಗವಹಿಸಿದ್ದರು ಎಂದು ಅಧ್ಯಕ್ಷ ಪವನ್ ರೇವಣಕರ್ ತಿಳಿಸಿದ್ದಾರೆ.