ದಾವಣಗೆರೆ, ಜೂ.12- ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ವತಿಯಿಂದ ನ್ಯಾಮತಿ ತಾಲ್ಲೂಕು ರಾಮೇಶ್ವರ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ತೊಗರಿಯ ನವೀನ ತಳಿ ಬಿಆರ್‌ಜಿ-5ನ ಪ್ರಾತ್ಯಕ್ಷಿಕೆಯನ್ನು 50 ರೈತರಿಗೆ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್, ಮಣ್ಣು ವಿಜ್ಞಾನಿ ಹನುಮಂತಗೌಡ್ರು ಮಾಹಿತಿ ನೀಡಿದರು. ಪ್ರಗತಿ ಪರ ರೈತರಾದ ಮಹೇಶ್ವರಪ್ಪ, ಜಿ. ಮಲ್ಲಿಕಾರ್ಜುನಪ್ಪ, ವಿರೂಪಾಕ್ಷಪ್ಪ, ಗಂಗಾಧರಪ್ಪ ಮತ್ತು ಕೇಂದ್ರದ ವಿಸ್ತರಣಾ ತಜ್ಞರಾದ ಜೆ. ರಘುರಾಜ್ ಉಪಸ್ಥಿತರಿದ್ದರು.