ಮಲೇಬೆನ್ನೂರು, ಜೂ.12- ಇಲ್ಲಿನ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಗ್ರಾಮಾಂತರ ವಿಭಾಗದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಅವರು ಪಟ್ಟಣದ ಎ.ಕೆ. ಕಾಲೋನಿ ನಿವಾಸಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದರು. ಪಿಎಸ್ಐ ವೀರಬಸಪ್ಪ, ಪುರಸಭೆ ಮಾಜಿ ಸದಸ್ಯ ಎ.ಕೆ. ನರಸಿಂಹಪ್ಪ, ಹೊಸಳ್ಳಿ ಕರಿಬಸಪ್ಪ, ಪಿ.ಆರ್. ರಾಜು, ಎ.ಕೆ. ಪ್ರಕಾಶ್, ಎ.ಕೆ. ಸುರೇಶ್ ಮತ್ತಿತರರು ಈ ವೇಳೆ ಹಾಜರಿದ್ದರು.
February 25, 2025