ದಾವಣಗೆರೆ, ಜೂ.12- ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ನಿಕ್ರಾ ಯೋಜನೆಯಡಿ ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ಬಿಆರ್‌ಜಿ-5 ಹಾಗೂ ಟಿ.ಎಸ್.-3 ಆರ್ ನವೀನ ತೊಗರಿ ತಳಿಗಳ ಪ್ರಾತ್ಯಕ್ಷಿಕೆಗಳನ್ನು ತಾಲ್ಲೂಕಿನ ಅಗಸನಕಟ್ಟೆಯಲ್ಲಿ 50 ರೈತರಿಗೆ ಹಾಗೂ ಪವಾಡ ರಂಗವ್ವನಹಳ್ಳಿಯಲ್ಲಿ 50 ರೈತರಿಗೆ ಪ್ರಾರಂಭಿಸಲಾಯಿತು.
ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್, ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ, ಮಣ್ಣು ವಿಜ್ಞಾನಿ ಹನುಮಂತನಗೌಡ್ರು ಮಾಹಿತಿ ನೀಡಿದರು. ಪ್ರಗತಿ ಪರ ರೈತರಾದ ಚನ್ನಪ್ಪ, ಶಿವಾನಂದಪ್ಪ ಹಾಗೂ ವಿಸ್ತರಣಾ ತಜ್ಞ ಜೆ. ರಘುರಾಜ ಉಪಸ್ಥಿತರಿದ್ದರು.