ದಾವಣಗೆರೆ, ಜೂ. 9- ನಗರದಲ್ಲಿ ಈಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮಹಿಳೆಯನ್ನು ರಕ್ಷಿಸಿದ ಉಪ ತಹಶೀಲ್ದಾರ್ ಎನ್.ಎಸ್. ಚಂದ್ರಪ್ಪ ಹಾಗೂ ಶ್ರೀಮತಿ ಬಿ.ಎಸ್. ರೇಣುಕ ದಂಪತಿಯನ್ನು ಸ್ಥಳೀಯ ಉಪ್ಪಾರ ವಿದ್ಯಾರ್ಥಿ ನಿಲಯದಲ್ಲಿ ನಿನ್ನೆ ಏರ್ಪಾಡಾಗಿದ್ದ ಸಮಾರಂಭದಲ್ಲಿ ಉಪ್ಪಾರ ಸಮಾಜದ ಬಂಧುಗಳು, ಸ್ನೇಹಿತರು, ನೌಕರರ ಸಂಘದ ಪದಾಧಿಕಾರಿಗಳು ಶಾಲು ಹೊದಿಸಿ, ಸನ್ಮಾನಿಸಿದರು. ಭಗೀರಥ ಸಮಾಜದ ಜಿಲ್ಲಾಧ್ಯಕ್ಷ ಗಿರೀಶ್, ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಎಸ್ಐ ಪರಶುರಾಮ್, ಭಗೀರಥ ನೌಕರರ ಸಂಘದ ಚನ್ನಗಿರಿ ಶಿಕ್ಷಕ ರಮೇಶ್, ಹರಪನಹಳ್ಳಿ ಎಎಸ್ ಐ ಕೊಟ್ರೇಶ್, ಕೆಎಸ್ಸಾರ್ಟಿಸಿ ನಿವೃತ್ತ ನೌಕರ ಬಾಬಣ್ಣ, ಹೆಚ್.ಎಸ್.ನಲ್ಕುಂದ ಹಾಲೇಶ್ ಮತ್ತಿತರರು ಚಂದ್ರಪ್ಪ ದಂಪತಿಯನ್ನು ಸನ್ಮಾನಿಸಿದರು.
December 25, 2024