ಹರಪನಹಳ್ಳಿ, ಜೂ.6- ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವಯೋನಿವೃತ್ತಿ ಹೊಂದಿರುವ ಶಿಕ್ಷಕರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು. ಶಿಕ್ಷಕರಾದ ಕೆ. ರಾಮಮೂರ್ತಿ, ಬಿ. ಗಣೇಶಪ್ಪ, ಯು. ಹುಲುಗಪ್ಪ, ಹೆಚ್. ಕೊಟ್ರಪ್ಪ, ಬಿ. ಕರಿಯಪ್ಪ, ಎಂ.ಪಿ. ಚಂದ್ರಪ್ಪ, ಹಾಮ್ಯನಾಯ್ಕ, ಹೇಮ್ಲಾನಾಯ್ಕ, ಜೆ. ನಾಗರಾಜ, ಹೆಚ್ ಶಿವಾನಂದಪ್ಪ, ಜೆ. ಕರಿಬಸಮ್ಮ, ಬಿ. ಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ವೀರಭದ್ರಯ್ಯ, ಇಸಿಓ ಹೆಚ್. ಮಲ್ಲಿಕಾರ್ಜುನ, ಗಿರಿಜ್ಜಿ ಜಯಮಾಲತೇಶ, ಮಂಜುನಾಥ, ಮಹಮದ್ ಗನೀಫ್, ಕಬೀರ್ ನಾಯ್ಕ, ವ್ಯವಸ್ಥಾಪಕ ಮೋಹನ್, ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರಾಮಪ್ಪ ಇನ್ನಿತರರಿದ್ದರು.
February 24, 2025