ಮಲೇಬೆನ್ನೂರು, ಜೂ.6- ಇಲ್ಲಿನ ಪುರಸಭೆ ಕಾರ್ಯಾಲಯದ ಆವರಣ ದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಹಿರಿಯ ಮುತ್ಸದ್ಧಿ ಡಾ. ಕೆ.ಪಿ. ಸಿದ್ಧಬಸಪ್ಪ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಶ್ರೀಯುತರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುರಸಭೆ ಸದಸ್ಯ ಎ. ಆರೀಫ್ ಅಲಿ, ಯೂಸೂಫ್, ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಅಧಿಕಾರಿಗಳಾದ ಗುರುಪ್ರಸಾದ್, ನವೀನ್, ಉಮೇಶ್, ಗಣೇಶ್, ದಿನಕರ್, ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ ಜ್ಯೋತಿ ನಾಗಭೂಷಣ್ ಮತ್ತಿತರರು ಭಾಗವಹಿಸಿದ್ದರು.
January 25, 2025