ಹರಪನಹಳ್ಳಿ, ಜೂ.6- ದಾವಣಗೆರೆ ಜಿ.ಪಂ. ಪ್ರಭಾರಿ ಅಧ್ಯಕ್ಷ ನಲ್ಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಲೋಕೇಶ್ ಮಾಡಾಳ್ ಅವರಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ, ಉಪಾಧ್ಯಕ್ಷ ಶಿವಾನಂದ, ಮುಖಂಡರಾದ ಬಾಲನಹಳ್ಳಿ ಕೆಂಚನಗೌಡ್ರು, ಟಿ. ಚಂದ್ರಪ್ಪ, ಟಿ.ಬಿ. ರಾಜ, ನಂದಿಬೇವೂರು ರಾಜಪ್ಪ, ಎಚ್.ಇ. ವೇಣುಗೋಪಾಲ, ಕೆಂಗಳ್ಳಿ ಪ್ರಕಾಶ, ರಮೇಶ, ಆರ್. ಕರಿಯಪ್ಪ ಹಾಗೂ ಇತರರಿದ್ದರು.
January 26, 2025