ದಾವಣಗೆರೆ, ಜೂ.3- ಲಾಕ್‌ಡೌನ್ ಸಂಕಷ್ಟದಿಂದ ನಲುಗುತ್ತಿರುವ 35ನೇ ವಾರ್ಡ್‌ನ ನಾಗರಿಕರಿಗೆ ವಾರ್ಡ್‌ನ ಪಾಲಿಕೆ ಸದಸ್ಯರಾದ ಶ್ರೀಮತಿ ಸವಿತಾ ಹುಲ್ಮನಿ ಗಣೇಶ್ ಅವರು ದವಸ ಧಾನ್ಯದ ಕಿಟ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಹುಲ್ಮನಿ ಗಣೇಶ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಪಾಲಿಕೆ ಸದಸ್ಯ ಗುಡಾಳ್ ಮಂಜುನಾಥ್, ಪಕ್ಷದ ಹಿರಿಯ ಮುಖಂಡರಾದ ಕಣಿವೆಪ್ಪರ್ ಮಂಜಣ್ಣ, ದೇವೇಂದ್ರಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಸಾಮಾಜಿಕ ಜಾಲತಾಣದ ಕೆ.ಎಲ್. ಹರೀಶ್ ಬಸಾಪುರ, ವಿಜಯ್ ಕುಮಾರ್, ಅಲ್ಲಾವಲಿ ಶಹಬಾನ್ ಖಾನ್ ಹಾಗೂ ಇನ್ನಿತರರಿದ್ದರು.
February 24, 2025