ಮಲೇಬೆನ್ನೂರು, ಜೂ.3- ಇಲ್ಲಿನ ಗೌಸ್ ನಗರಕ್ಕೆ ಕೊರೊನಾ ಸೋಂಕಿತ ಪೊಲೀಸ್ ಪೇದೆ ಭೇಟಿ ನೀಡಿದ್ದ ಕಾರಣ ಸೀಲ್‌ಡೌನ್ ಮಾಡಿರುವ ವಾರ್ಡ್‌ನಲ್ಲಿ ಪುರಸಭೆಯಿಂದ ಬುಧವಾರ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಪವರ್ ಸ್ಪ್ರೇ ಮೂಲಕ ಸಿಂಪಡಣೆ ಮಾಡಲಾಯಿತು.
ಹೆಚ್ಚಿನ ನಿಗಾ : ಪಟ್ಟಣದಲ್ಲಿ ಕೊರೊನಾ ವೈರಸ್ ಕಾಲಿಡದಂತೆ ನೋಡಿಕೊಳ್ಳುವ ಉದ್ದೇಶದಿಂದ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ತಿಳಿಸಿದ್ದಾರೆ. ಸಂಜೆ 7 ಗಂಟೆಗೆ ನಿಗದಿತ ಎಲ್ಲಾ ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡುವುದರ ಜೊತೆಗೆ ಪಟ್ಟಣಕ್ಕೆ ಬರುವವರ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.