ದಾವಣಗೆರೆ, ಜೂ.3- ಕೋವಿಡ್-19 ರಾಜ್ಯ ವ್ಯಾಪ್ತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಗೆ ನೆರವಾಗಲು ಮಹಾನಗರ ಪಾಲಿಕೆಯ ಅಧಿಕಾರಿ, ನೌಕರರು ಏಪ್ರಿಲ್-2020ರ ಮಾಹೆಯ ವೇತನದಲ್ಲಿ ಒಂದು ದಿನದ ವೇತನ ರೂ. 3,02,421/-ಗಳನ್ನು ಜಿಲ್ಲಾಧಿಕಾರಿಗಳ ಮುಖೇನ ಸಿ.ಎಂ. ಪರಿಹಾರ ನಿಧಿಗೆ ಜಮಾ ಮಾಡಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ, ಉಪ ಆಯುಕ್ತ (ಆಡಳಿತ) ವಿ.ಎಂ.ಪ್ರಭುಸ್ವಾಮಿ, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಸಿ. ಬಸವರಾಜಯ್ಯ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜು ಉಪಸ್ಥಿತರಿದ್ದರು.