ಹೊನ್ನಾಳಿಯಲ್ಲಿ ಮೀನುಗಾರನ ಬಲೆಗೆ ಬಿದ್ದ ಬೃಹದಾಕಾರದ ಮೀನು

ಹೊನ್ನಾಳಿ, ಜೂ.2- ಪಟ್ಟಣದ ಪಕ್ಕ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ 4 ಅಡಿ ಉದ್ದ, 32 ಕೆ.ಜಿ. ತೂಕದ ಬೃಹ ದಾಕಾರದ ಮೀನು ಹೊನ್ನಾಳಿಯ ಟಿ.ಬಿ. ವೃತ್ತದ ಮೀನುಗಾರ ಮಲ್ಲೇಶ್ ಎಂಬುವವರ ಬಲೆಗೆ ಬಿದ್ದಿದೆ. ಎಂದಿನಂತೆ ಸೋಮವಾರ ಬೆಳಿಗ್ಗೆ ತುಂಗಭದ್ರಾ ನದಿಯಲ್ಲಿ ಮೀನು ಹಿಡಿಯಲು ಮಲ್ಲೇಶ್ ಬಲೆ ಬೀಸಿದಾಗ ಈ ದೊಡ್ಡ ಮೀನು ಬಲೆಗೆ ಬಿದ್ದಿದೆ. ಮೀನು ನೋಡಲು ಇಲ್ಲಿನ ಟಿ.ಬಿ. ವೃತ್ತದ ಬಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು.

ತುಂಗಾ ಹಾಗೂ ಭದ್ರಾ ಜಲಾನಯನ ಪ್ರದೇಶಗಳಲ್ಲಿ ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ನದಿ ಪಾತ್ರದ ಮೇಲ್ಭಾಗದಿಂದ ಮೀನುಗಳು ಬಂದಿರಬಹುದು ಎಂದು ಅಂದಾಜಿಸಲಾಗಿದೆ.

error: Content is protected !!