ಪುರಸಭೆಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಮಾಹಿತಿ ಕಾರ್ಯಾಗಾರ

ಮಲೇಬೆನ್ನೂರು, ಮೇ 30- ಇಲ್ಲಿನ ಪುರಸಭೆಯ ಕೌನ್ಸಿಲ್‌ ಸಭಾಂಗಣದಲ್ಲಿ ಭೌಗೋಳಿಕ ಆಸ್ತಿ ಪದ್ದತಿ ಮತ್ತು ಆಸ್ತಿಗಳ ಗಣಕೀಕರಣ ಕಾರ್ಯ ಕುರಿತಾದ ಕಾರ್ಯಾಗಾರದಲ್ಲಿ ಸರ್ಕಾರ ನಿಯೋಜನೆ ಮಾಡಿರುವ ಶಿಕಾರಿಪುರ ಪುರಸಭೆಯ ಅಧಿಕಾರಿ ದೇವೇಂದ್ರ ನಾಯ್ಕ ಅವರು ಸಮಗ್ರ ಮಾಹಿತಿ ನೀಡಿದರು.

ಗ್ರಾ.ಪಂ. ನಿಂದ ಮೇಲ್ದರ್ಜೆೋ ಹೊಂದಿರುವ ಪುರಸಭೆಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ವ್ಯವಸ್ಥೆ ಮತ್ತು ಪುರಸಭೆ ವ್ಯಾಪ್ತಿ ಸಮೀಕ್ಷೆ, ರಸ್ತೆ ಹಾಗೂ ಚರಂಡಿಗಳ ಅಂಕಿ ಅಂಶ ಸಂಗ್ರಹದ ಬಗ್ಗೆ ದೇವೇಂದ್ರ ನಾಯ್ಕ ಅವರು, ಪುರಸಭೆ ಅಧಿಕಾರಿಗಳಿಗೆ, ಸದಸ್ಯರಿಗೆ, ಸಾರ್ವಜನಿಕರಿಗೆ ವಿವರಿಸಿದರು.

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಪುರಸಭೆ ಸದಸ್ಯರಾದ ಎ.ಆರೀಫ್‌ ಅಲಿ, ಮಾಸಣಗಿ ಶೇಖರಪ್ಪ, ಯೂಸೂಫ್, ದಾದಾವಲಿ, ಮಹಾಲಿಂಗಪ್ಪ, ಆದಾಪುರ ವಿಜಯಕುಮಾರ್, ಭೋವಿ ಕುಮಾರ್, ಅಧಿಕಾರಿಗಳಾದ ದಿನಕರ್, ಉಮೇಶ್, ಗುರುಪ್ರಸಾದ್, ನವೀನ್, ಇಂಜಿನಿಯರ್ ನೌಷಾದ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

error: Content is protected !!