ಕಂದಾಯ ಕಟ್ಟಲು ಸರದಿಯಲ್ಲಿ ಕುಳಿತ ಜನತೆ

ಲಾಕ್‌ಡೌನ್‌ ನಿಂದ ಜೀವನ ದುಸ್ತರವಾಗಿದ್ದರೂ ಮಹಾನಗರ ಪಾಲಿಕೆ ಕಂದಾಯ ಕಟ್ಟಲು ಸ್ಥಳೀಯರು ಸರದಿಯಲ್ಲಿ ಕುಳಿತು ಕಂದಾಯ ಪಾವತಿಸುತ್ತಿದ್ದಾರೆ.

ಹೌದು, ಪಾಲಿಕೆಯ ಒಳಗಿನ ಆವರಣದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ದೂರ ದೂರದಲ್ಲಿ ಕುರ್ಚಿಗಳನ್ನು ಇಡಲಾಗಿದ್ದು, ಸರದಿಯಲ್ಲಿ ಕುಳಿತು ಮನೆ ಕಂದಾಯ, ನಲ್ಲಿ ಕಂದಾಯ ಸೇರಿದಂತೆ ವಿವಿಧ ಬಗೆಯ ಆಸ್ತಿ ಕಂದಾಯಗಳನ್ನು ಪಾವತಿ ಮಾಡುತ್ತಿದ್ದಾರೆ. ಒಂದು ವೇಳೆ ಈ ಅವಧಿಯಲ್ಲಿ ಕಂದಾಯ ಪಾವತಿಸದೇ ಹೋದಲ್ಲಿ ಬಡ್ಡಿ ಸೇರಿಸಿ ಕಟ್ಟಬೇಕಾದೀತು ಎಂಬ ಭಯ ಕಾಡುತ್ತಿದೆ. ಈ ನಿಟ್ಟಿನಲ್ಲಿಯೇ ಹಲವರು ಕಂದಾಯ ಕಟ್ಟಲು ಪಾಲಿಕೆಯತ್ತ ದೌಡಾಯಿಸಿದ್ದಾರೆ.

error: Content is protected !!