ದಾವಣಗೆರೆ, ಮೇ 23- ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕರೆಯ ಮೇರೆಗೆ ದೇಶಾದ್ಯಂತ ಕೋವಿಡ್-19 ಕರ್ತವ್ಯದಲ್ಲಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೆಲಸ ಮಾಡುತ್ತಿರುವ ಎಲ್ಲಾ ಗುತ್ತಿಗೆ ಹಾಗೂ ಸ್ಕೀಂ ನೌಕರರಿಂದ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.
ಗುತ್ತಿಗೆ ನೌಕರರು ಹಗಲು-ರಾತ್ರಿ ಎನ್ನದೆ, ಹಬ್ಬ-ಹರಿದಿನ ಎನ್ನದೇ, ರಜೆಯನ್ನು ಪಡೆಯದೆ ತಮ್ಮ ಜೀವ ಪಣಕ್ಕಿಟ್ಟು ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಆರೋಗ್ಯ ರಕ್ಷಣೆಯಾಗಲೀ ಅಥವಾ ಉದ್ಯೋಗ ಭದ್ರತೆಯಾಗಲೀ ಇರುವುದಿಲ್ಲ. ಹೂವು ಸಾಕು, ಸುರಕ್ಷತೆ ಮತ್ತು ವಿಮೆ ಬೇಕು ಎಂದು ಜಿಲ್ಲಾ ಸಿಐಟಿಯು ಸಂಚಾಲಕ ಕೆ.ಹೆಚ್. ಆನಂದರಾಜು, ಗುತ್ತಿಗೆ ನೌಕರರ ಸಂಘದ ಸಂಚಾಲಕ ಹಾಲಸ್ವಾಮಿ ಇನ್ನಿತರರು ಮನವಿ ಮೂಲಕ ಆಗ್ರಹಿಸಿದ್ದಾರೆ.