ದಾವಣಗೆರೆ, ಮೇ 21- ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ನ ವತಿಯಿಂದ ಮನೆಗೆಲಸ, ಕೂಲಿ, ಹೋಟೆಲ್‌ಗಳಲ್ಲಿ ಕೆಲಸ ಮಾಡಿ, ಜೀವನ ನಿರ್ವಹಣೆ ಮಾಡುತ್ತಿ ರುವ ಬಡ ಕುಟುಂಬ ಗಳಿಗೆ ಗ್ಯಾಸ್ ಸಿಲಿಂಡರ್ ವಿತರಿಸಲಾಯಿತು. ಇಂದಿನ ಕೊರೊನಾ ಹಾವಳಿಯಿಂದಾಗಿ ಕೆಲಸಕ್ಕೆ ಕರೆದುಕೊಳ್ಳದಿರುವುದರಿಂದ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ. ಇದನ್ನು ಗಮನಿಸಿದ ಕರುಣಾ ಟ್ರಸ್ಟ್ 2 ತಿಂಗಳು ಉಪಯೋಗಕ್ಕೆ ಬರುವಂತಹ ಗ್ಯಾಸ್ ಸಿಲಿಂಡರ್ ಕೊಟ್ಟು ಸಹಕರಿಸುತ್ತಿದೆ. ಇದೇ ರೀತಿ 50 ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಕೊಡುವ ಉದ್ದೇಶ ಟ್ರಸ್ಟ್‌ನದ್ದಾಗಿದೆ. ದಾನಿಗಳು ಸಹೃದಯದಿಂದ ದಾನವನಿತ್ತು ಸಹಕರಿಸಲು ಇಚ್ಚಿಸಿದಲ್ಲಿ ವೀಣಾ (9110455199), ಲಿಂಗರಾಜ (95380 24422), ಪಾಟೀಲ್ (6361352381) ಅವರನ್ನು ಸಂಪರ್ಕಿಸಬಹುದಾಗಿದೆ.
December 29, 2024