ಜಗಳೂರು, ಏ.30- ಇಲ್ಲಿನ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿ.ಮಹೇಶ್ವರಪ್ಪ ತಮ್ಮ ಸ್ವಂತ ಹಣದಲ್ಲಿ ತಾಲ್ಲೂಕಿನ ಪತ್ರಕರ್ತರಿಗೆ ಆಹಾರದ ಕಿಟ್ ವಿತರಿಸುವ ಮೂಲಕ ಸೇವಾ ಮನೋಭಾವ ಮೆರೆದಿದ್ದಾರೆ.
ಕೊರೊನಾ ಭೀತಿಗೂ ಜಗ್ಗದೇ ಮನೆಯಿಂದ ಹೊರಬಂದು ಪ್ರತಿನಿತ್ಯ ಲಾಕ್ಡೌನ್ ಪರಿಣಾಮದಿಂದ ಉಂಟಾದ ಸಮಸ್ಯೆಗಳ ಬಗ್ಗೆ, ಸಂಕಷ್ಟಕ್ಕೆ ಸಿಲುಕಿದ್ದ ಬಡವರು, ಕಾರ್ಮಿಕರ ಬಗ್ಗೆ ವಿಸ್ತೃತ ವರದಿಗಳನ್ನು ನೀಡಿ ಕರ್ತವ್ಯ ಮಾಡಿದ ಪತ್ರಕರ್ತರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುವ ಮಹೇಶ್ ಅವರು, ಒಂದೂವರೆ ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಆಹಾರ ಪದಾರ್ಥಗಳ ಕಿಟ್ಟನ್ನು 25ಕ್ಕೂ ಹೆಚ್ಚು ಪತ್ರಕರ್ತರಿಗೆ ವಿತರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಕಳೆದ ಒಂದು ತಿಂಗಳಿಂದ ಜಗಳೂರು ತಾಲ್ಲೂಕಿನಲ್ಲಿ ಕೊರೊನಾ ಜಾಗೃತಿ ಸಂಬಂಧ ನಡೆದ ಎಲ್ಲಾ ಕಾರ್ಯಕ್ರಮಗಳಲ್ಲಿ ಪತ್ರಕರ್ತರು ನಮ್ಮಂತೆ ಭಾಗವಹಿಸಿದ್ದಾರೆ. ಅವರ ಮೇಲೆ ಲಾಕ್ಡೌನ್ ಪರಿಣಾಮ ಬೀರಿದೆ ಎಂದು ನನಗನ್ನಿಸಿತು. ಹೀಗಾಗಿ ನನ್ನ ಮಾಸಿಕ ವೇತನದಲ್ಲಿ ಆಹಾರದ ಕಿಟ್ಗಳನ್ನು ವಿತರಿಸಿ ಅಳಿಲು ಸೇವೆ ಮಾಡಿದ್ದೇನೆ ಎನ್ನುತ್ತಾರೆ ಮಹೇಶ್ವರಪ್ಪ.
December 24, 2024