ದೇವದಾಸಿಯರಿಗೆ ಕಿಟ್ ವಿತರಣೆ

ಹರಪನಹಳ್ಳಿ, ಮೇ 19- ತಾಲ್ಲೂಕಿನ ಮಾಜಿ ದೇವದಾಸಿಯರಿಗೆ ತಾಲ್ಲೂಕು ಪಂಚಾಯ್ತಿಯ ಸಾಮರ್ಥ್ಯ ಸೌಧದಲ್ಲಿ ಅಜೀಮ್ ಪ್ರೇಮ್‌ಜಿ ಹಾಗೂ ಸೀಡ್ಸ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನೀಡಿದ್ದ ಆಹಾರದ ಕಿಟ್‌ಗಳನ್ನು ಶಾಸಕ ಜಿ. ಕರುಣಾಕರ ರೆಡ್ಡಿ ವಿತರಿಸಿದರು.
 ನಂತರ ಮಾತನಾಡಿದ ಶಾಸಕರು, ದೇವದಾಸಿ ಎಂಬ ಅನಿಷ್ಠ ಪದ್ಧತಿ ತೊಲಗಲು ಸರ್ಕಾರ ವಿವಿಧ ಸೌಲಭ್ಯಗಳನ್ನು ನೀಡಿದೆ. ನಿಮ್ಮನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮ ವಹಿಸುತ್ತಿದೆ ಎಂದರು. ಸಾಮಾಜಿಕ ವಿದ್ಯಾ ಮತ್ತು ಆರ್ಥಿಕ ಅಭಿವೃದ್ಧಿ ಸಂಸ್ಥೆ (ಸೀಡ್ಸ್)ಯ ಸಂಜೀವಯ್ಯ ಮಾತನಾಡಿ, ತಾಲ್ಲೂಕಿನ 48 ಹಳ್ಳಿಗಳ 656 ಮಾಜಿ ದೇವದಾಸಿ ಫಲಾನುಭವಿಗಳಿಗೆ ಆಹಾರದ ಕಿಟ್ ವಿತರಿಸುವುದಾಗಿ ತಿಳಿಸಿದರು.
ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ತಹಶೀಲ್ದಾರ್ ಡಾ. ನಾಗವೇಣಿ, ಸಿಪಿಐ ಕೆ. ಕುಮಾರ್, ಪಿಎಸ್‌ಐ ಕೆ. ಪ್ರಕಾಶ್, ಇ.ಓ. ಅನಂತರಾಜ್, ರಾಜ್ಯ ದೇವದಾಸಿ ವಿಮೋಚನಾ ಸಂಘದ ಅಧ್ಯಕ್ಷೆ ಟಿ.ವಿ. ರೇಣುಕಮ್ಮ, ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆಯ ಅಧಿಕಾರಿ ಪ್ರಜ್ಞಾ ಪಾಟೀಲ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಮಂಜಾನಾಯ್ಕ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಬಿಜೆಪಿ ಎಸ್‌ಟಿ ಘಟಕದ ತಾಲ್ಲೂಕು ಅಧ್ಯಕ್ಷ ಆರ್. ಲೋಕೇಶ್, ಬಾಗಳಿ ಕೊಟ್ರೇಶಪ್ಪ, ಮುಖಂಡರಾದ ಎಂ.ಪಿ. ನಾಯ್ಕ್, ಆರ್. ಕರೇಗೌಡ, ಯಡಿಹಳ್ಳಿ ಶೇಖರಪ್ಪ, ರಾಘವೇಂದ್ರ ಶೆಟ್ಟಿ, ಯು.ಪಿ. ನಾಗರಾಜ್, ತಿಮ್ಮಣ್ಣ ಇನ್ನಿತರರು ಉಪಸ್ಥಿತರಿದ್ದರು.

error: Content is protected !!