ದಾವಣಗೆರೆ, ಏ.20- ನಗರದ ನರಹರಿ ಶೇಟ್ ಕಲ್ಯಾಣ ಮಂಟಪದ ಎದುರು ಮತ್ತು ಪೂಜಾ ಹೋಟೆಲ್ ಪಕ್ಕದಲ್ಲಿರುವ ನಿರಾಶ್ರಿತರಿಗೆ ದಿನೇಶ್ ಕೆ. ಶೆಟ್ಟಿ ಅಭಿಮಾನಿ ಬಳಗದಿಂದ ಊಟದ ವ್ಯವಸ್ಥೆ ಮಾಡಲಾಯಿತು.
ದಿನೇಶ್ ಕೆ. ಶೆಟ್ಟಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ವಾರ್ಡ್ ಅಧ್ಯಕ್ಷ ಅಜ್ಜಪ್ಪ ಪವಾರ್ ನಿರಾಶ್ರಿತರಿಗೆ ಅಗತ್ಯವಾದ ದಿನಸಿಯನ್ನು ಒದಗಿಸಿದರು. ದಿನೇಶ್ ಶೆಟ್ಟಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಯುವರಾಜ್, ಶಿವಕುಮಾರ್ ಶೆಟ್ಟಿ, ಶ್ರೀಕಾಂತ್ ಬಗರೆ, ವಿವೇಕ್ ಎಸ್. ಆಲದಹಳ್ಳಿ, ಧನುಷ್ ಶೆಟ್ಟಿ, ಪವನ್ ಹಾಗೂ ಮೇಘರಾಜ್ ಇನ್ನಿತರರಿದ್ದರು.
February 24, 2025