ಕರ್ನಾಟಕ ಜೈನ್ ಅಸೋಸಿಯೇಷನ್ ನಿಂದ ಆಹಾರದ ಪೊಟ್ಟಣ ವಿತರಣೆ

ದಾವಣಗೆರೆ, ಮೇ 5- ಕೊರೂನಾ ವೈರಸ್ ಸಾಂಕ್ರಾಮಿಕ ರೋಗ ತಡೆಗಟ್ಟುವ ಲಾಕ್‌ಡೌನ್ ಬೆಂಬಲಿಸಿ ನಿರಾಶ್ರಿತರಿಗೆ, ಅಸಹಾಯಕ ಜನ ರಿಗೆ, ಅಸಂಘಟಿತ ಕಾರ್ಮಿಕ ವರ್ಗಕ್ಕೆ  ಶ್ರವಣಬೆಳಗೊಳದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರ  `50ನೇ ದೀಕ್ಷಾ ಮಹೋತ್ಸವದ’ ಅಂಗವಾಗಿ ಕರ್ನಾ ಟಕ ಜೈನ್ ಅಸೋಸಿಯೇಷನ್, ಬೆಂಗಳೂರು ದಾವಣಗೆರೆ ವಿಭಾಗದ ವತಿಯಿಂದ ರೈಸ್‌ಬಾತ್ ಆಹಾರ ಪೊಟ್ಟಣ, ಕುಡಿಯುವ ನೀರು ಮತ್ತು ಮಜ್ಜಿಗೆ ಒಳಗೊಂಡ  550 ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.
ಭಗವಾನ್ ಶ್ರೀ ಆದಿನಾಥ ಜಿನ ಮಂದಿರದ ಮುಂಭಾಗದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್ ಅವರ ಸಮ್ಮುಖದಲ್ಲಿ ವಿತರಣೆ ಆರಂಭಗೊಂಡಿತು.ಕರ್ನಾಟಕ ಜೈನ್ ಅಸೋಸಿಯೇಷನ್, ದಾವಣಗೆರೆ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯ ಡಿ.ಸುನೀಲ್ ಕುಮಾರ್ ನೇತೃತ್ವದಲ್ಲಿ  ಆಹಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರ ನೀಡಿದ ನಗರದ ದಿಗಂಬರ ಜೈನ್‌ ಸಮಾಜ ಶ್ರೀ ಮಹಾವೀರ ಸಂಘದ ಅಧ್ಯಕ್ಷ ಬಿ.ಎಸ್.ಅಜಿತ್‌ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.   

error: Content is protected !!