ದಾವಣಗೆರೆ, ಮೇ 12- ಬೆಂಗಳೂರು ಕಾವೇರಿ ಸೇವಾ ಫೌಂಡೇಷನ್ ಮತ್ತು ಜನನಿ ಫೌಂಡೇಷನ್ ಸಹಯೋಗದಲ್ಲಿ ಕೋವಿಡ್-19 ಸೇವೆ ಸಲ್ಲಿಸುತ್ತಿರುವ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸುಮಾರು 13,800 ರೂಪಾಯಿ ಮೌಲ್ಯದ 60 ಪಿಪಿಇ ಕಿಟ್ಗಳನ್ನು ವಿತರಿಸಲಾಯಿತು.
ಆಸ್ಪತ್ರೆಯ ಆರ್ಎಂಓ ಸಂಜಯ್ ಮತ್ತು ಶಶಿಧರ್ ಅವರಿಗೆ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಜನನಿ ಫೌಂಡೇಷನ್ ಸದಸ್ಯರಾದ ಶಿವಪ್ರಸಾದ್ ಕುರುಡಿಮಠ್, ಕೆ.ಆರ್. ಮಲ್ಲಿಕಾರ್ಜುನ್, ಧನಂಜಯ ಬದ್ರಿ, ವಿಜಯ ಇನ್ನಿತರರಿದ್ದರು.
December 25, 2024