ದಾವಣಗೆರೆ, ಮೇ 12- ದಕ್ಷಿಣ ವಿಧಾನಸಭಾ ಕ್ಷೇತ್ರದ ಶಿವ ನಗರದಲ್ಲಿ ಒಬ್ಬ ವ್ಯಕ್ತಿ ಕೊರೊನಾ ವೈರಸ್ ಸೋಂಕಿಗೊಳಗಾದ ಕಾರಣ ಕಂಟೈನ್ ಮೆಂಟ್ ಜೋನ್ ಅನ್ನು ಸೀಲ್‌ಡೌನ್ ಮಾಡಲು ನಗರಪಾಲಿಕೆ ಮಹಾಪೌರ ಬಿ.ಜಿ. ಅಜಯ್ ಕುಮಾರ್, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾ ಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರು ಸ್ಥಳಕ್ಕೆ ತೆರಳಿದ ಸಮಯದಲ್ಲಿ ಸ್ಥಳೀಯ ಸಾರ್ವಜನಿಕರು ವಿರೋಧಿಸಿದ ವೇಳೆ ಸ್ಥಳೀಯರಿಗೆ ಮಹಾಪೌರ ಅಜಯ್‌ಕುಮಾರ್ ಹಾಗೂ ಅಧಿಕಾರಿಗಳು ತಿಳುವಳಿಕೆ ಹೇಳಿ, ಅವರಿಗೆ ಯಾವುದೇ ತೊಂದರೆ ಆಗ ದಂತೆ ದಿನ ಬಳಕೆಯ ವಸ್ತುಗಳು ಮತ್ತು ಸರ್ಕಾರದ ಎಲ್ಲಾ ಸವಲತ್ತುಗಳನ್ನು ತಲುಪಿಸು ವುದಾಗಿ ಭರವಸೆ ನೀಡಿ, ಮಾನಸಿಕವಾಗಿ ಧೈರ್ಯವನ್ನು ತುಂಬುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಿ ಮನವೊಲಿಸಿ ಶಿವ ನಗರವನ್ನು ಸೀಲ್‌ಡೌನ್ ಮಾಡಿದರು.
February 25, 2025