ಮಾಸ್ಕ್‌ ಧರಿಸದವರಿಗೆ ದಂಡ ಹಾಕಿ ಜಾಗೃತಿ ಮೂಡಿಸಿದ ಪುರಸಭೆ ಸಿಓ

Home ಚಿತ್ರದಲ್ಲಿ ಸುದ್ದಿ ಮಾಸ್ಕ್‌ ಧರಿಸದವರಿಗೆ ದಂಡ ಹಾಕಿ ಜಾಗೃತಿ ಮೂಡಿಸಿದ ಪುರಸಭೆ ಸಿಓ

ಮಾಸ್ಕ್‌ ಧರಿಸದವರಿಗೆ ದಂಡ ಹಾಕಿ ಜಾಗೃತಿ ಮೂಡಿಸಿದ ಪುರಸಭೆ ಸಿಓ

ಮಲೇಬೆನ್ನೂರು, ಮೇ 10- ಪಟ್ಟಣದಲ್ಲಿ ಮಾಸ್ಕ್‌ ಧರಿಸದೆ ಓಡಾಡುವ ಜನರಿಗೆ ದಂಡ ಹಾಕಿದ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್‌ ಅವರು ನಂತರ ಅವರಿಗೆ ಕೊರೊನಾ ಜಾಗೃತಿ ಮೂಡಿಸಿ ಹೊಸ ಮಾಸ್ಕ್‌ ಕೊಟ್ಟು ಕಳುಹಿಸಿದ ಘಟನೆ ಈಚೆಗೆ ನಡೆಯಿತು.
ಸಂತೆ ರಸ್ತೆ, ಎಸ್‌.ಹೆಚ್‌. ರಸ್ತೆ, ಸೇರಿದಂತೆ ವಿವಿಧ ಕಡೆಗಳಲ್ಲಿ ಮಾಸ್ಕ್‌ ಧರಿಸದ 30 ಜನರಿಗೆ 30 ಸಾವಿರ ರೂ. ದಂಡ ವಿಧಿಸಲಾಯಿತು.
ರಾತ್ರಿ ಕಾರ್ಯಾಚರಣೆ : ಪಟ್ಟಣದಲ್ಲಿ ಲಾಕ್‌ಡೌನ್‌ ನಿಬಂಧನೆ ಉಲ್ಲಂಘನೆ ಮಾಡಿ ರಾತ್ರಿ ವೇಳೆ ಓಪನ್‌ ಮಾಡುತ್ತಿದ್ದ ಅಂಗಡಿಗಳನ್ನು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್‌ ಅವರು ಗುಪ್ತ ಕಾರ್ಯಾಚರಣೆ ಮೂಲಕ ಸೀಜ್‌ ಮಾಡಿದ್ದಾರೆ. ಅಲ್ಲದೇ ಕುಡಿಯುವ ನೀರಿನ ಟ್ಯಾಂಕ್‌ಗಳಿಗೆ ಮಧ್ಯರಾತ್ರಿ ಅಕ್ರಮವಾಗಿ ಮೋಟಾರ್‌ ಹಾಕಿ ನೀರು ಎತ್ತುತ್ತಿದ್ದುದನ್ನು ಪತ್ತೆ ಮಾಡಿ, ಮೋಟಾರ್‌ ವಶಪಡಿಸಿಕೊಂಡಿದ್ದಾರೆ.
ಶಾಲಾ-ಕಾಲೇಜು ಬಳಿ ಗುಂಪು-ಗುಂಪಾಗಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ, ಬುದ್ಧಿ ಕಲಿಸಿದ ಸಿಓ ಅವರ ಕ್ರಮಗಳ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ತಪಾಸಣೆ : ಅಪೂರ್ವ ಆಸ್ಪತ್ರೆಯ ಡಾ. ಅಪೂರ್ವ ಅವರು ಗುರುವಾರ ಸಂಜೆ ಪುರಸಭೆಯ ಎಲ್ಲಾ ಪೌರ ಕಾರ್ಮಿಕರ, ಸಿಬ್ಬಂದಿಗಳ ಆರೋಗ್ಯ ತಪಾಸಣೆ, ಅಗತ್ಯ ಔಷಧಗಳನ್ನು ಉಚಿತವಾಗಿ ನೀಡಿದರು.

error: Content is protected !!