ಮಲೇಬೆನ್ನೂರು, ಏ. 27- ಪಟ್ಟಣದ ಬೀಜ, ಗೊಬ್ಬರ, ಕ್ರಿಮಿನಾಶಕ ವ್ಯಾಪಾರಿಗಳು ಪುರಸಭೆಯ ಪೌರ ಕಾರ್ಮಿಕರಿಗೆ, ಸಿಬ್ಬಂದಿಗಳಿಗೆ 1 ಸಾವಿರ ರೂ. ಮೌಲ್ಯದ 40 ಫುಡ್ ಕಿಟ್ಗಳನ್ನು ವಿತರಿಸಿದರು.
ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಉಪತಹಶೀಲ್ದಾರ್ ರವಿ, ಹರಿಹರ ತಾ. ಬೀಜ, ಗೊಬ್ಬರ ಕ್ರಿಮಿನಾಶಕ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ. ಕರಿಬಸಯ್ಯ, ಗೌ. ಅಧ್ಯಕ್ಷ ಹೆಚ್.ಜಿ. ಚಂದ್ರಶೇಖರಪ್ಪ, ಗುರು ಫರ್ಟಿಲೈಸರ್ಸ್ ನ ಎಳೆಹೊಳೆ ಕುಮಾರ್, ಮೆ|| ಎಂ.ಜಿ. ಮೆಹೆರ್ವಾಡೆ ಅಂಡ್ ಸನ್ಸ್ನ ಎಂ.ಜಿ. ಗಜಾನನ, ಬಸವೇಶ್ವರ ಟ್ರೇಡರ್ಸ್ನ ಪೂಜಾರ್ ರಂಗನಾಥ್, ಭೂದೇವಿ ಫರ್ಟಿಲೈಸರ್ಸ್ನ ಎಸ್. ರಂಗಪ್ಪ, ರೇವಣಸಿದ್ದೇಶ್ವರ ಟ್ರೇಡರ್ಸ್ನ ಪೂಜಾರ ರಮೇಶ್, ಮಂಜುನಾಥ ಟ್ರೇಡರ್ಸ್ನ ನಿಟ್ಟೂರು ಮಂಜು, ಗುಳದಹಳ್ಳಿ ಸ್ವಾಮಿ, ವಿಘ್ನೇಶ್ವರ ಟ್ರೇಡರ್ಸ್ನ ಶಿವಕುಮಾರ್ ಮತ್ತು ಪುರಸಭೆ ಸದಸ್ಯರಾದ ಮಹಾಲಿಂಗಪ್ಪ, ಯುಸೂಫ್, ಸುಬ್ಬಿ ರಾಜಪ್ಪ, ಭೋವಿಕುಮಾರ್, ಪಾನಿಪೂರಿ ರಂಗನಾಥ್, ಜಿಯಾವುಲ್ಲಾ, ಫಕೃದ್ಧೀನ್, ಪುರಸಭೆ ಅಧಿಕಾರಿಗಳಾದ ಗುರುಪ್ರಸಾದ್, ಉಮೇಶ್, ನವೀನ್ ಈ ವೇಳೆ ಹಾಜರಿದ್ದರು.
ಊಟದ ವ್ಯವಸ್ಥೆ : ಪಟ್ಟಣದ ಬಟ್ಟೆ ಅಂಗಡಿ ವ್ಯಾಪಾರಿಗಳು ಪುರಸಭೆಯ ಪೌರ ಕಾರ್ಮಿಕರಿಗೆ, ಸಿಬ್ಬಂದಿಗೆ, ಆಶಾ ಕಾರ್ಯಕರ್ತೆಯರಿಗೆ ಮತ್ತು ನಿರಾಶ್ರಿತರಿಗೆ ಸೋಮವಾರ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದರು.
December 25, 2024