ಸಂತೇಬೆನ್ನೂರು, ಏ. 27- ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಗಂಗಾ ಬಸವರಾಜ್ ಇಲ್ಲಿನ ಸಾವಿರ ಬಡ ಕುಟುಂಬಳಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ, ಆರಕ್ಷಕ ಸಿಬ್ಬಂದಿ ಸಹಯೋಗದಲ್ಲಿ ಕಾನೂನಿನ ಪರಿಪಾಲನೆಯೊಂದಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.
ವಿತರಣಾ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ. ಸಿದ್ದಪ್ಪ, ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಕೆ. ಸಿರಾಜ್ ಅಹ್ಮದ್, ತಾ.ಪಂ. ಮಾಜಿ ಅಧ್ಯಕ್ಷ ಜೆ. ರಂಗಸ್ವಾಮಿ, ಪಿಎಸ್ಐ ಶಿವರುದ್ರಪ್ಪ ಮೇಟಿ, ಗ್ರಾ.ಪಂ. ಸದಸ್ಯರಾದ ರಹಮತ್ ಉಲ್ಲಾ, ಶಿವಮೂರ್ತಪ್ಪ, ಬಿ.ಎನ್. ರಾಜು, ಸಂತೋಷ್, ಮುದಿಯಪ್ಪರ ಶಿವು, ರುದ್ರೇಶ್, ಜಿ.ಎನ್. ಸೂರಪ್ಪ, ಗ್ರಾ.ಪಂ. ಕಾರ್ಯದರ್ಶಿ ಭೈರಪ್ಪ ಉಪಸ್ಥಿತರಿದ್ದರು.
ಕಿಟ್ಗಳನ್ನು ಆಶಾ ಕಾರ್ಯಕರ್ತೆಯರಿಗೆ, ಗ್ರಾ.ಪಂ. ನೌಕರರಿಗೆ, ಆಸ್ಪತ್ರೆ ನೌಕರ ಸಿಬ್ಬಂದಿಗೆ ಹಾಗೂ ಆರ್ಥಿಕ ದುರ್ಬಲರಿಗೆ ಗ್ರಾ.ಪಂ.ಪಟ್ಟಿ ಆಧಾರದಲ್ಲಿ ವಿತರಿಸಲಾಯಿತು.
February 24, 2025