ಹರಿಹರ, ಏ.13- ನಗರದ ಸಂತ ಅಲೋಷಿಯಸ್ ಕಾಲೇಜು ವತಿಯಿಂದ ಹರಿಹರ ತಹಶೀಲ್ದಾರ್ ಸಮ್ಮುಖದಲ್ಲಿ ಮಂಗಳಮುಖಿಯರು, ದೇವದಾಸಿಯರು, ಬಡವರು ಹಾಗೂ ನಿರ್ಗತಿಕರಿಗೆ ಆಹಾರ ಸಾಮಗ್ರಿಗಳ ವಿತರಣೆ ಮಾಡಲಾಯಿತು.
ಕಾಲೇಜು ಮುಖ್ಯಸ್ಥ ಫಾ. ಎನಿಕ್ ಮತಾಯಸ್, ಫಾ. ಸಂತೇಶ್ ಫರ್ನಾಂಡೀಸ್, ಫಾ. ಪ್ರದೀಪ್ ಸಿಕ್ವೇರಾ, ಟಿ.ಎಸ್. ಮಂಜುನಾಥ, ಸುರೇಶ್ ಬಳ್ಳಾರಿ ಹಾಗೂ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಸಮ್ಮುಖದಲ್ಲಿ ಸಾಮಗ್ರಿಗಳನ್ನು ವಿತರಿಸಲಾಯಿತು.
December 26, 2024