ಹರಪನಹಳ್ಳಿ, ಏ.18- ತಾಲ್ಲೂಕಿನ ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ನಿರಾಶ್ರಿತರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಬಡವರಿಗೆ ಊಟ ನೀಡಲಾಯಿತು.
ಪಟ್ಟಣದ ಹಿರೆಕೆರೆಯ ನಿರಾಶ್ರಿತರಿಗೆ, ವಾಲ್ಮೀಕಿ ಸಮುದಾಯ ಭವನದ ಹಿಂದೆ ವಾಸವಿರುವ ಬಾಲಬಸವ ಕುಟುಂಬಗಳಿಗೆ, ಇಸ್ಲಾಂಪುರದ ಕೂಲಿ ಕಾರ್ಮಿಕರಿಗೆ, ಹೊಸಪೇಟೆ ರಸ್ತೆ ಬಳಿ ಇರುವ ನಿರಾಶ್ರಿತರಿಗೆ, ಹರಿಹರಿ ಹೊಸಪೇಟೆ ರಸ್ತೆ ಬಳಿ ಇರುವ ಆಸರೆ ಕಾಲೋನಿಯಲ್ಲಿರುವ ನಿರ್ಗತಿಕ ಕುಟುಂಬಗಳಿಗೆ ಆಹಾರವನ್ನು ನೀಡಲಾಯಿತು.
ಭಜರಂಗದಳದ ಕೆ. ಅಶೋಕ್ಜೀ, ಪಿ. ಹಾಲೇಶ್, ಜಿ. ಅಶೋಕ್, ನಿಟ್ಟೂರು ಸುರೇಶ್, ವೀರೇಶ್ ಹಿಂದೂಸ್ತಾನಿ, ದ್ಯಾಮಜ್ಜಿ ಹನುಮಂತ, ಎ. ಶ್ರೀನಿವಾಸ ಹಾಗೂ ಇನ್ನಿತರರಿದ್ದರು.
February 24, 2025