ಕೋವಿಡ್ ಪರಿಹಾರಕ್ಕೆ ವಿವಿಯಿಂದ 2.5 ಲಕ್ಷ ರೂ. ಚೆಕ್

ದಾವಣಗೆರೆ, ಏ.18- ಕೊರೊನಾ ವೈರಾಣು ಸಾಂಕ್ರಾಮಿಕ ರೋಗ ತಡೆಯಲು ಮತ್ತು ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾನಿಲಯ ವತಿಯಿಂದ ದಾವಣಗೆರೆ ಜಿಲ್ಲಾಡಳಿತಕ್ಕೆ 2.50 ಲಕ್ಷ ರೂ. ಪರಿಹಾರದ ಚೆಕ್‌ ನೀಡಲಾಯಿತು.
ವಿವಿ ಉಪಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಜಿಲ್ಲಾಧಿಕಾರಿಗಳಿಗೆ ಚೆಕ್‌ ನೀಡಿ, ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಕಾರ್ಮಿಕರು, ದುರ್ಬಲರು, ಅಂಗವಿಕಲರು ಸೇರಿದಂತೆ ಹಲವರು ತೊಂದರೆ ಅನುಭವಿಸುತ್ತಿದ್ದಾರೆ. ಅಂತಹವರನ್ನು ಗುರ್ತಿಸಿ ನೆರವು ನೀಡಲು ಮನವಿ ಮಾಡಿದರು.
ಪರಿಹಾರದ ಚೆಕ್‌ ಸ್ವೀಕರಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲಾಡಳಿತ ಕೈಗೊಂಡಿರುವ ಕಾರ್ಯಚಟುವಟಿಕೆಗಳನ್ನು ತಿಳಿಸಿದರು. ವಿವಿ ಸಹ ತನ್ನ ದತ್ತು ಗ್ರಾಮಗಳಲ್ಲಿ ಅರ್ಹರನ್ನು ಗುರ್ತಿಸಿ ಅವರಿಗೆ ನೆರವಾಗುವ ಕಾರ್ಯ ಕೈಗೊಳ್ಳಬೇಕು. ರೋಗದ ಅಪಾಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ವಿವಿ ಕುಲಸಚಿವ ಪ್ರೊ. ಬಸವರಾಜ ಬಣಕಾರ, ಸಂಯೋಜನಾಧಿಕಾರಿ ಡಾ. ಅಶೋಕ್‌ಕುಮಾರ ಪಾಳೇದ, ಜಿಲ್ಲಾ ನೋಡಲ್ ಅಧಿಕಾರಿ ಡಾ. ಬಸವರಾಜ ಉಪಸ್ಥಿತರಿದ್ದರು.

error: Content is protected !!