ಹರಿಹರ, ಡಿ.20 – ನಗರದ `ನನ್ನ ಊರು ನನ್ನ ಹೊಣೆ’ ಸಂಘಟನೆ ವತಿಯಿಂದ ಸಂಕ್ರಾಂತಿ ಹಬ್ಬದ ನಿಮಿತ್ತವಾಗಿ ನಗರದ ತುಂಗಭದ್ರಾ ನದಿಯ ಮಡಿಲಲ್ಲಿ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಕೆ.ಜಿ.ಸಿದ್ದೇಶ್, `ನನ್ನ ಊರು ನನ್ನ ಹೊಣೆ’ ಮುಖ್ಯಸ್ಥ ಆರ್.ರಾಘವೇಂದ್ರ, ರವಿಶಂಕರ್ ಗದ್ಗಿಮಠ, ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್, ಅಂಜು ಸುರೇಶ್ ರಾಜನ್ನವರ್, ಕರಿಬಸಪ್ಪ ಕಂಚಿ ಕೇರಿ, ಮಂಜುನಾಥ್ ಗದ್ಗಿಮಠ್, ರುದ್ರೇಗೌಡ, ರಮೇಶ್, ಮಧು ಕುಮಾರ್, ಗಣೇಶ್ ಇತರರು ಹಾಜರಿದ್ದರು.
December 27, 2024