ನ್ಯಾಮತಿ,ಡಿ.20- ಕೋವಿಡ್ನಿಂದ ಮೃತಪಟ್ಟ ಕುಟುಂಬಕ್ಕೆ ಕೇಂದ್ರ ಸರ್ಕಾರ 50 ಸಾವಿರ, ರಾಜ್ಯ ಸರ್ಕಾರ ಒಂದು ಲಕ್ಷ ಪರಿಹಾರ ನೀಡುತ್ತಿದ್ದು, ನಾನು ವ್ಯಯಕ್ತಿಕ ವಾಗಿ 10 ಸಾವಿರ ಪರಿಹಾರ ನೀಡುತ್ತಿರುವು ದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ಪಟ್ಟಣ ಪಂಚಾಯಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕುಂದು – ಕೊರತೆ ಸಭೆಯ ನಂತರ ಕೋವಿ ಡ್ನಿಂದ ಮೃತಪಟ್ಟ ನಾಲ್ಕು ಕುಟುಂಬಕ್ಕೆ ರಾಜ್ಯ ಸರ್ಕಾರ ನೀಡುವ 1 ಲಕ್ಷದ ಪರಿ ಹಾರದ ಚೆಕ್ ವಿತರಿಸಿ ಮಾತನಾಡಿದರು.
ಹೊನ್ನಾಳಿ ತಾಲೂಕಿನಲ್ಲಿ ಕೋವಿಡ್ ನಿಂದ ಮೃತಪಟ್ಟ 37 ಜನರಿಗೆ ಪರಿಹಾರ ಚೆಕ್ಗಳನ್ನು ನೀಡಿದ್ದು, ನ್ಯಾಮತಿ ತಾಲೂಕಿನಲ್ಲಿ 126 ಅರ್ಜಿಗಳು ಬಂದಿದ್ದು, ಅದರಲ್ಲಿ ನಾಲ್ಕು ಜನರಿಗೆ ಇಂದು ಪರಿಹಾರದ ಚೆಕ್ ವಿತರಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲರಿಗೂ ಪರಿಹಾರದ ಚೆಕ್ಗಳನ್ನು ನೀಡುವುದಾಗಿ ಹೇಳಿದರು..
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಣುಕಾ, ಉಪ ತಹಶೀಲ್ದಾರ್ ನಾಗ ರಾಜ್, ಪ.ಪಂ.ಮುಖ್ಯಾಧಿಕಾರಿ ಕೊಟ್ರೇಶ್, ಇಂಜಿನಿಯರ್ ಶಶಿಧರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಉಮಾ ರಮೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಪಿ.ರವಿಕುಮಾರ್ ಉಪಸ್ಥಿತರಿದ್ದರು.