ಜಗಳೂರು, ಡಿ.20- ಇಲ್ಲಿನ ವಸತಿ ಶಾಲೆಯಲ್ಲಿ ಮಕ್ಕಳು ಕಲುಷಿತ ಆಹಾರ ಸೇವನೆ ಮಾಡಿ ಅಸ್ವಸ್ತಗೊಂಡ ಹಿನ್ನೆಲೆಯಲ್ಲಿ ಇಂದು ವಸತಿ ಶಾಲೆಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಎಸ್.ಪಿ. ರಿಷ್ಯಂತ್ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ತಿಂಡಿ, ಊಟ ಸರಿಯಾಗಿ ನೀಡುವುದಿಲ್ಲ , ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇಲ್ಲ ಎಂದು ಮಕ್ಕಳು ತಮ್ಮ ಆಳಲನ್ನು ಅಧಿಕಾರಿಗಳ ಮುಂದೆ ತೊಡಿಕೊಂಡರು. ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಮಕ್ಕಳಿಗೆ ಸಮರ್ಪಕವಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
December 28, 2024